ಜೇನಿನ ಹೊಳೆಯೋ
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ವಾಣಿಯ ವೀಣೆಯ ಸ್ವರ ಮಾಧುರ್ಯವೊ
ಸುಮಧುರ ಸುಂದರ ನುಡಿಯೊ ... ಆಹ || ಪ||
ಕವಿ ನುಡಿ ಕೋಗಿಲೆ ಹಾಡಿದ ಹಾಗೆ
(ದ ಪ ದ ... ರಿ ಸ ರಿ ... )
(ಗ ಪ ಪ ದ ಸ ರಿ ದ ಸ )
ಕವಿ ನುಡಿ ಕೋಗಿಲೆ ಹಾಡಿದ ಹಾಗೆ
ಸವಿ ನುಡಿ ತಣ್ಣನೆ ಗಾಳಿಯ ಹಾಗೆ
ಒಲವಿನ ಮಾತುಗಳಾಡುತಲಿರಲು
ಮಲ್ಲಿಗೆ ಹೂಗಳು ಅರಳಿದ ಹಾಗೆ
ಮಕ್ಕಳು ನುಡಿದರೆ ಸಕ್ಕರೆಯಂತೆ
ಅಕ್ಕರೆ ನುಡಿಗಳು ಮುತ್ತುಗಳಂತೆ
ಪ್ರೀತಿಯ ನೀತಿಯ ಮಾತುಗಳೆಲ್ಲ
ಸುಮಧುರ ಸುಂದರ ನುಡಿಯೊ ... ಆಹ || ಜೇನಿನ ||
ಕುಮಾರ ವ್ಯಾಸನ ಕಾವ್ಯದ ಚಂದ
ಕವಿ ಸರ್ವಜ್ಞನ ಪದಗಳ ಅಂದ || ೨ ||
ದಾಸರು ಶರಣರು ನಾಡಿಗೆ ನೀಡಿದ
ಭಕ್ತಿಯ ಗೀತೆಗಳ ಪರಮಾನಂದ
ರನ್ನನು ರಚಿಸಿದ ಹೊನ್ನಿನ ನುಡಿಯು
ಪಂಪನು ಹಾಡಿದ ಚಿನ್ನದ ನುಡಿಯು
ಕನ್ನಡ ತಾಯಿಯು ನೀಡಿದ ವರವು
ಸುಮಧುರ ಸುಂದರ ನುಡಿಯೊ ... ಆಹ || ೩||
ಪರಿಕರಗಳು
ಸಾಲದ ಮಾಸಿಕ ಕಂತು (EMI)
ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.
ಹೆಸರು ಹುಡುಕಿ
ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.
ಕರ್ನಾಟಕ ರಾಜ್ಯ
ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!